KULASAI DASARA
Swipe right
ಕುಲಸಯಿ ದಸರಾ
ಹತ್ತು ದಿನಗಳಲ್ಲಿ
ಬೆಳೆದು ನಿಂತಳು,
ಆ ದೇವಿ ಲಲಿತಾಂಬಿಕೆ
ಮಹಿಷನ ಮರ್ಧಿಸಲು!
ಊರ ಜನರ
ಅಭೀಷ್ಟಗಳ ನೆರವೇರಿಸಲು...
ತಮ್ಮ ಇಷ್ಟ ದೇವತೆಗಳಂತೆ
ಉಡುಗೆಯುಟ್ಟು,
ಆ ಕುಲಸಯಿಯ ಜನರು,
ತಮ್ಮ ಕುಲದೇವತೆಯ ನೆನೆದು
ಮೈಮೇಲೆ ಪಡೆದು,
ದುಖಃ ದುಮ್ಮಾನವ
ದಮನ ಮಾಡಿಕೊಳ್ಳುವರು!
ತಮ್ಮ ಅಭಿಮಾನವನ್ನು,
ತಮ್ಮ ಅಧ್ಯಾತ್ಮದ ಅರಿವನ್ನು,
ಶಿವ ಮತ್ತು ಶಕ್ತಿಗೆ ತೋರ್ಪಡಿಸುವ
ಹತ್ತು ದಿನದ ಆ ಪ್ರವರ!
ಅದೇ ಸಂಭ್ರಮ, ಸಡಗರದ
ಕುಲಸಯಿ ದಸರಾ...
Kulasai dasara
In ten days she rose,
The graceful Goddess Lalithambika,
To conquer the demon Mahisha,
And fulfill the prayers
Of her devoted people.
Adorned as their cherished deity,
The people of Kulasai,
Remembering their clan Goddess,
Bear her on their bodies,
And drive away sorrow and grief.
With pride and deep devotion,
They reflect their spiritual connection
To Shiva and Shakti,
In this ten-day grandeur!
Such is the joy and festivity
Of Kulasai dasara...