MAJULI
Swipe right
Embark on a visual exploration with my photo series on Majuli, Assam. It isn’t just a place; it’s a living, breathing testament to the beauty of a life lived in harmony with nature.
ಮಾಜುಲಿ
ಸಮಯವೇ ನಿಂತಹಾಗೆ
ಆ ಊರಿನಲ್ಲಿ,
ಆ ಸಿಹಿನೀರ
ನಡುವಣ ದ್ವೀಪದಲ್ಲಿ...
ಆ ಬ್ರಹ್ಮಪುತ್ರ ನದಿಯ
ತಟದ ಜನರ ಮೇಲೆ
ಜನಜೀವನದ ಮೇಲೆ
ವೈಷ್ಣವ ಧರ್ಮದ ಪ್ರಭಾವ!
ಅಲ್ಲಿಯ ಜನರು ಮತ್ತವರ ಜೀವನ
ಬಲು ಅಪರೂಪ, ಬಲು ಸುಂದರ
ಬಲು ಸರಳ, ಬಲು ನಿಧಾನ,
ಆಲಸ್ಯವಲ್ಲ!
ಸೈಕಲ್ ಮೇಲೆ ಹೊರಟ
ಮಹಿಳೆಯರು, ಪುರುಷರು
ತಮ್ಮ ತಮ್ಮ ಕೆಲಸ ಮುಗಿಸಿ,ಬರುವರು,
ಸಾತ್ವಿಕತೆಯ ಮೂರ್ತ ಸ್ವರೂಪದಂತೆ!
Majuli
As if time has paused,
in that village,
on the sweet-watered isle
in the river’s heart…
Along the Brahmaputra's banks,
the people and their lives
are touched by Vaishnavism’s spirit.
Their lives—rare and beautiful,
simple and slow-paced,
yet never lazy.
Men and women on bicycles,
returning from daily work,
embody serenity’s quiet grace.